ಇವತ್ತು Office ಕೆಲಸ ಮಾಡುವುದನ್ನು ಬಿಟ್ಟು ತುಂಬಾ ದಿನಗಳಾದ ಮೇಲೆ ಬ್ಲಾಗ್ ಬರೆಯಬೇಕೆಂದು ಕುಳಿತಿದ್ದೇನೆ. ಬರೀ facebook , twitter , gtalk ಅಂತ ಸಮಯ ವ್ಯರ್ಥ ಮಾಡೋ ಬದಲು ಅವೆಲ್ಲದರ ಬಗ್ಗೆ ವಿಮರ್ಷಿಸೋಣ ಅಂತನಿಸ್ತು. ಇಂದಿನ ಕಂಪ್ಯೂಟರ್ ಯುಗದಲ್ಲಿ you ought to be involved in social networking. ನಿನ್ನೆ ತಂಗಿ ಜೊತೆ ಮಾತಾಡ್ತಾ, ಅವಳು ಹೇಳ್ತಾ ಇದ್ದ್ಲು. ಅವಳಿಗೆ Facebook ಅಕೌಂಟ್ ಇಲ್ಲ. ಎಲ್ಲ ಫ್ರೆಂಡ್ಸ್ ಕೇಳೋದು.. ನೀನು facebook ಅಲ್ಲಿ ಇದ್ಯಾ ? ಇಲ್ಲ ಅಂದ್ರೆ ಯಾಕೆ ಇಲ್ಲ ಅಂತ. ಮುಂಚೆ ಮೊಬೈಲ್ ನಂಬರ್ ಕೇಳುತಿದ್ದ ಹಾಗೆ, ಇಂದು meet ಆದಾಗ "What is your Facebook ID / gtalk ID / twitter ID?" ಅಂತ ಜನ ಕೇಳ್ತಾರೆ.
ಭಾರತದಲ್ಲಿ 3 -4 ವರ್ಷಗಳ ಹಿಂದೆ Orkut ಎಂಬ ಗೂಗಲ್ ನ networking ಸೈಟ್ ಬಹಳ famous ಆಗಿತ್ತು. ಇಂದು ಎಲ್ಲರೂ Wholesale ಆಗಿ Facebook ಸೇರುತ್ತ ಇದಾರೆ. ನಿಮ್ಮ ಕಳೆದು ಹೋದ ಗೆಳೆಯರನ್ನು ಹುಡುಕಬಹುದು,ಯಾವುದೇ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು "status" ಮೂಲಕ ಫ್ರೆಂಡ್ಸ್ list ಗೆ ತಿಳಿಸಬಹುದು, ನಿಮಗೆ ಸಿಗೋ best link ಗಳನ್ನು share ಮಾಡಬಹುದು, photos share ಮಾಡೋಕ್ಕೆ ಇದು ಒಳ್ಳೆ ಮಾರ್ಗ, ಬೇರೆಯವರ ಅನಿಸಿಕೆ ಬಗ್ಗೆ ಟೀಕಿಸಬಹುದು. Photos upload ಮಾಡೋಕ್ಕೆ competition ಆಗಿದೆ. ಎಲ್ಲರಿಂದಾನು ಕಾಮೆಂಟ್ ಬರಬೇಕು ಅನ್ನೋದಕ್ಕಾಗಿ, ಚಿತ್ರ ವಿಚಿತ್ರ ರೀತಿಯಲ್ಲಿ ಪೋಸ್ ಕೊಟ್ಟು ಅದಕ್ಕಾಗೆ ಮನೆಯಲ್ಲಿ ಫೋಟೋ session ಕೂಡ ಇರುತ್ತೆ.
ಬ್ರಿಟಿನ್ ನಲ್ಲಂತೂ ಜನ ಒಂದು small communication ಗೂ Online use ಮಾಡ್ತಾರೆ. ಹೊರಗಡೆ ಮಳೆಯಾಗ್ತಿದೆ ಅಂತಾನೋ, snow ಆಗ್ತಿದೆ ಅಂತಾನೋ, ಇವತ್ತು badminton ಆಡೋಕ್ಕೆ ಯಾರಾದ್ರು ಬರ್ತೀರಾ ಅಂತಾನೋ, ಹೀಗೆ.ಏನು ಇಲ್ಲಾಂದ್ರೆ ನಂಗೆ ನಿದ್ದೆ ಬರ್ತಾ ಇದೆ ಅಂತ ಜನರ status ಇರುತ್ತೆ. :) ಅವ್ರಿಗೆ ಮಾತ್ರ account ಸಾಲದು ಅಂತ, ಅವರ ಬೆಕ್ಕು ನಾಯಿಗಳಿಗೂ twitter account ಇರುತ್ತೆ, ಅದರ ಆಟೋಟಗಳನ್ನು ವರ್ಣಿಸಲು. :)
ಹಳೆಯ colleague ಮೊನ್ನೆ ಹೇಳ್ತಾ ಇದ್ರು, " ನನ್ನ ಹೆಂಡ್ತಿ ಆರ್ಕುಟ್ ನಲ್ಲಿ ಬೇರೆಯವರ ಟ್ರಿಪ್ ಫೋಟೋಸ್ ನೋಡಿದಾಗ ತುಂಬಾ upset ಆಗ್ತಾಳೆ. ಎಲ್ಲರ ಗಂಡಂದಿರೂ ತಮ್ಮ wife ನ ಟೂರ್ ಕರದೆಕೊಂದು ಹೋಗ್ತಾರೆ, ನೀವು ಮಾತ್ರ ಎಲ್ಲೂ ಕರೆದುಕೊಂಡು ಹೋಗೋಲ್ಲ" ಅಂತ complaint ಇರುತ್ತೆ. ಇದು ಬೇರೊಬ್ಬರ ಜೀವನವನ್ನೇ ಹಾಳು ಮಾಡು ಮಟ್ಟಕ್ಕೆ ಹೋಯಿತಲ್ಲ ಅಂತ ಬೇಸರವಾಗುತ್ತೆ. ಹಾಗಾಗಿ ಒಮ್ಮೊಮ್ಮೆ ನಾನು status update ಅಥವ ಫೋಟೋಸ್ share ಮಾಡೋ ಮುನ್ನ ಯೋಚಿಸಬೇಕಾಗುತ್ತೆ, because others might envy.
What I feared most that has happened as per this study from Stanford.
Social Network ಬೇಕು ನಿಜ, ಆದರೆ ಅದನ್ನ ಜನ ಬಳಸೋ ಸಮಯ, ಅದರಿಂದ ಪ್ರಭಾವಿತರಾಗುವುದನ್ನ ಕಡಿಮೆ ಮಾಡಬೇಕು. ಇದು ನನಗೂ ಕೂಡ ಅನ್ವಯಿಸುತ್ತೆ. ಬರೀ advise ಮಾಡ್ತಿಲ್ಲ :) ಹಾಗಂತ ಇದರಿಂದ ನೂರೆಂಟು ಲಾಭಗಳೂ ಇವೆ. ಮೊನ್ನೆ Bristol ನಲ್ಲಿ ಒಂದು ಕೊಲೆ ಪ್ರಕರಣವನ್ನು ತನಿಖೆ ಮಾಡಲು CBI ನವರು ಒಂದು FB ಪೇಜ್ ಮಾಡಿದ್ರು. ಅದರಿಂದಾಗಿ ಸುಮಾರು 300 ಜನ ಪೊಲೀಸರಿಗೆ ಮಾಹಿತಿ ಕೊಟ್ಟರಂತೆ.
ಎಲ್ಲದರಲ್ಲೂ ಒಳ್ಳೆಯದು ಕೆಟ್ಟದು ಇರುತ್ತೆ. ನಿಮಗೆ ಯಾವುದು ಸೂಕ್ತವೋ ಅದನ್ನು ಮಾತ್ರ ಪಡೆಯೋದು ಗೊತ್ತಿದ್ರೆ ಇಂದಿನ ಟ್ರೆಂಡ್ ಜೊತೆ ನೀವೂ ಮುನ್ನಡೆಯಬಹುದು. Good luck!